+91 9611100374|admin@indiaforyou.in

ಮೂರುತಿಯನೆ ನಿಲಿಸೋ

Home//ಮೂರುತಿಯನೆ ನಿಲಿಸೋ

ಮೂರುತಿಯನೆ ನಿಲಿಸೋ

ಮೂರುತಿಯನೆ ನಿಲಿಸೋ ಮಾಧವ ನಿನ್ನ|

ಎಳೆ ತುಳಸಿಯ ವನಮಾಲೆಯು ಕೊರಳೊಳು
ಪೊಳೆವ ಪೀತಾಂಬರದಿಂದ ಒಪ್ಪುವ ನಿನ್ನ||

ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀಲಕುಮಿಯು ಉರದಿ ಒಪ್ಪುವ ನಿನ್ನ||

ಭಕ್ತರ ಕಲ್ಪತರು ಭಾಗ್ಯದ ಸುರಧೇನು
ಮುಕ್ತಿದಾಯಕ ನಮ್ಮ ಪುರಂದರ ವಿಟ್ಠಲ||

—-ಪುರಂದರದಾಸ

By | 2015-04-17T11:45:41+00:00 April 17th, 2015||0 Comments

About the Author:

Leave A Comment