+91 9611100374|admin@indiaforyou.in

ಮಾನವ ಸಂತಾನದೆಡೆಗೆ

//ಮಾನವ ಸಂತಾನದೆಡೆಗೆ

ಮಾನವ ಸಂತಾನದೆಡೆಗೆ

ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು
ಅದ ನೆನೆದರೆ ಕಂಬನಿಯೆಕೋಡಿಯೊಡೆದು ಹರಿವುದು ||

ಹುಟ್ಟಿದಂದಿನಿಂದ ನಾನು
ನಿನ್ನಾಣೆಯ ಮೀರಿದೆ
ಆದರೂ ನೀ ಅಕ್ಕರೆಯಲಿ
ತಾಯ್ತನವನೆ ತೋರಿದೆ|
ಮಧುರ ವಚನದಿಂದ ಮನವ
ಸಂತೈಸುವ ನಲಿಸಿದೆ
ಇದ ನೆನೆದರೆ ಕಂಬನಿಯೆ
ಕೋಡಿಯೊಡೆದು ಹರಿದಿದೆ||

ನಿನ್ನೊಲವಿನ ಹೊರೆಯ ಹತ್ತು
ನಾನು ಬಹಳ ಬಳಲಿದೆ
ಇನ್ನು ಮುಂದೆ ಹೊರಲಾರಜೆ
ಎದೆಯು ನರಳಿ ಕೊರಗಿದೆ|
ನಿನ್ನೊಲವಿನ ಕರಸ್ಪರ್ಶದಿ
ಈ ನೋವನು ನೀಗಿಸು
ನಿನ್ಮ ಪಾದಪದ್ಮದಲಿ
ನನ್ನನಿರಿಸಿ ಪಾಲಿಸು||

—-ವಚನವೇದ

By | 2015-04-17T11:36:55+00:00 April 17th, 2015||0 Comments

About the Author:

Leave A Comment