+91 9611100374|admin@indiaforyou.in

ಮಾಡಿ ಮಾಡಿ ಕೆಟ್ಟರು

Home//ಮಾಡಿ ಮಾಡಿ ಕೆಟ್ಟರು

ಮಾಡಿ ಮಾಡಿ ಕೆಟ್ಟರು

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ||

ಮಾಡಿದೆನೆಂಬುದು ಮನದಲಿ ಹೊಳೆದರೆ
ನೀಡಿದೆನೆಂಬುದು ನಿಜದಲಿ ತಿಳಿದರೆ
ಏಡಿಸಿ ಕಾಡಿತ್ತು ಶಿವನ ಡಂಗುರ||

ಮಾಡಿದೆನೆನ್ನದಿರಾ ಲಿಂಗಕೆ
ನೀಡಿದೆನೆನ್ನದಿರಾ ಜಂಗಮಕೆ
ಮಾಡುವ ನೀಡುವ ನಿಜಗುಣವುಳ್ಳವರ
ಕೂಡಿಕಂಡಿಪ್ಪ ನಮ್ಮ ಕೂಡಲಸಂಗಯ್ಯ||

—-ಬಸವಣ್ಣ

By | 2015-04-17T11:27:53+00:00 April 17th, 2015||0 Comments

About the Author:

Leave A Comment