+91 9611100374|admin@indiaforyou.in

ಮಾಡಬಾರದ ಮಾಡಿ

//ಮಾಡಬಾರದ ಮಾಡಿ

ಮಾಡಬಾರದ ಮಾಡಿ

ಮಾಡಬಾರದ ಮಾಡಿ, ಆಗಬಾರದು ಆಗಿ
ಬಾಳೆಲ್ಲ ಬರಿದಾಗಿ, ಗೋಳೊಂಬೆ ಉಲಿದಾಗ
ಅಂತರಾಳದಿ ಬೆಳಗಿ, ಸಂತಸವ ಕರುಣಿಸಿಹೆ
ಏಳು ಮಗು, ನಾನಿಹೆನು ಎನ್ನುತ್ತ ಕರೆದೆ||

ಅವರಿವರ ಉಪದೇಶ ಬರಿಯ ಬಾಯ್ಮಾತಾಗಿ
ರವಿರಹಿತ ಕತ್ತಲೆಯೆ ಎತ್ತೆತ್ತ ಕವಿದಾಗ
ಕರುಣಿಸಿಹೆ ಓ ತಾಯಿ, ತವ ಚರಣದಾಶ್ರಯವ
ಬಾ ಕಂದ, ಇಹೆ ನಾನು, ಕುಂದದಿರು ಎಂದು||

ಜಗವೆಲ್ಲ ಕೈಬಿಟ್ಟು ಮತಿಗೆಟ್ಟು, ಗತಿಗೆಟ್ಟು,
ಆವುದನು ಗೈಯಲೂ ತ್ರಾಣವಿಲ್ಲದ ಎನಗೆ
ನಾನೆ ಸಾಧನೆ ಸಿದ್ಧಿ ಗತಿ ಆಸರೆಯು ನಿನಗೆ
ಎನ್ನುತ್ತ ವರವಿತ್ತ ಗುರು-ದೈವ-ಜನನಿ||

—ಸ್ವಾಮಿ ಶಾಸ್ತ್ರಾನಂದ

By | 2015-04-17T11:19:20+00:00 April 17th, 2015||0 Comments

About the Author:

Leave A Comment