+91 9611100374|admin@indiaforyou.in

ಮಣಿವೆ ನಿನ್ನ ಕಮಲದಡಿಗೆ

//ಮಣಿವೆ ನಿನ್ನ ಕಮಲದಡಿಗೆ

ಮಣಿವೆ ನಿನ್ನ ಕಮಲದಡಿಗೆ

ಮಣಿವೆ ನಿನ್ನ ಕಮಲದಡಿಗೆ
ದಯದಿ ಬಾರೊ ಎದೆಯ ಗುಡಿಗೆ||

ಭಕ್ತಹೃದಯಜಲಜ ಬಂಧು
ನೀನಪಾರ ಕರುಣೆ ಸಿಂಧು|
ಪ್ರೇಮಭಕ್ತಿಯೊಡನೆ ಕೂಡಿ
ಬಾರೈ ತಂದೆ ಕರೆವೆ ಬೇಡಿ||

ತ್ಯಾರಮೂರ್ತಿ ತಪೋಮೂರ್ತಿ
ಜ್ಞಾನಮೂರ್ತಿ ಸೊಗದ ಮೂರ್ತಿ|
ಹರಿದಿದೆಲ್ಲೆಡೆ ನಿನ್ನ ಕೀರ್ತಿ
ತ್ಯಾರಪಥದ ನಿತ್ಯಸ್ಪೂರ್ತಿ||

ವಿಶ್ವದೊಡೆಯ ಶುದ್ಧಹೃದಯ
ಕೋಟಿಸೂರ್ಯ ಜ್ಯೋತಿರೂಪ|
ನಿನ್ನೀ ಕಂದನ ಕರೆಯನಾಲಿಸಿ
ಬಾರೆ ಬೇಗ ಶಕ್ತಿವೆರಸಿ||

—ಸ್ವಾಮಿ ತದ್ರೂಪಾನಂದ

By | 2015-04-17T10:25:33+00:00 April 17th, 2015||0 Comments

About the Author:

Leave A Comment