+91 9611100374|admin@indiaforyou.in

ಮಣಿಯಲೆನ್ನ ಶಿರವು

//ಮಣಿಯಲೆನ್ನ ಶಿರವು

ಮಣಿಯಲೆನ್ನ ಶಿರವು

ಮಣಿಯಲೆನ್ನ ಶಿರವು ನಿನ್ನ
ಚರಣಧೂಳಿ ತಲದಲಿ|
ನನ್ನ ಅಹಂಕಾರವೆಲ್ಲ
ಮುಳುಗಲಶ್ರುಜಲದಲಿ||

ನನಗೆ ನಾನೆ ಪೂಜೆಗೈಯೆ
ಸೊಡರನೆತ್ತಲು
ಬೆಳಕು ಬರುವ ಬದಲು ಅಯ್ಯೋ
ಬರಿಯ ಕತ್ತಲು
ಅಹಂಕಾರದಂಧಕಾರ
ಮುತ್ತುತಿದೆ ಸುತ್ತಲು||

ನನ್ನ ನಾನೆ ಮೆರೆಯದಂತೆ
ನಾನು ಗೈವ ಕರ್ಮದಿ
ನಿನ್ನ ಇಚ್ಛೆ ಪೂರ್ಣವಾಗಲೆನ್ನ
ಜೀವಧರ್ಮದಿ|
ತಳೆಯಲೆನ್ನ ಜ್ಞಾನ ನಿನ್ನ
ಚರಮ ಶಾಂತಿಯ
ಬೆಳಗಲೆನ್ನ ಪ್ರಾಣ ನಿನ್ನ
ಪರಮ ಕಾಂತಿಯ
ನನ್ನನಳಿಸು ನೀನೆ ನೆಲಸು
ಹೃದಯಪದ್ಮದಲದಲಿ||

—-ಕುವೆಂಪು

By | 2015-04-17T10:04:38+00:00 April 17th, 2015||0 Comments

About the Author:

Leave A Comment