+91 9611100374|admin@indiaforyou.in

ಬೇವು ಬೆಲ್ಲದೊಳಿಡಲೇನು ಫಲ

Home//ಬೇವು ಬೆಲ್ಲದೊಳಿಡಲೇನು ಫಲ

ಬೇವು ಬೆಲ್ಲದೊಳಿಡಲೇನು ಫಲ

ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ||

ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ|
ಸಟೆಯನ್ನಾಡುವ ಮನುಜರು ಸಂತತ
ನಟನೆಯ ಮಾಡಿದರೇನು ಫಲ||

ಕಪಟತನದಲಿ ಕಾಡುತ ಜನರನು
ಜಪವನು ಮಾಡಿದರೇನು ಫಲ|
ಕುಪಿತತನವನು ಬಿಡದೆ ನಿರಂತರ
ಉಪವಾಸ ಮಾಡಿದರೇನು ಫಲ||

ಮಾತಾಪಿತರನು ಬಳಲಿಸಿದಾತನು
ಯಾತ್ರೆಯ ಮಾಡಿದರೇನು ಫಲ|
ಘಾತಕತನವನು ಬಿಡದೆ ನಿರಂತರ
ಗೀತೇಯನೋದಿದರೇನು ಫಲ||

ಹೀನಗುಣಂಗಳ ಹಿಂಗದೆ ಗಂಗೆಯ
ಸ್ನಾವ ಮಾಡಿದರೇನು ಫಲ|
ಕ್ಷೀನಿಧಿ ಪುರಂದರವಿಟ್ಠಲನ ನೆನೆಯದೆ
ಮೌನವ ಮಾಡಿದರೇನು ಫಲ||

—ಪುರಂದರದಾಸ

By | 2015-04-17T07:25:39+00:00 April 17th, 2015||0 Comments

About the Author:

Leave A Comment