+91 9611100374|admin@indiaforyou.in

ಬಿಡು ಬಿಡು ಬಾಹ್ಯದೊಳು

//ಬಿಡು ಬಿಡು ಬಾಹ್ಯದೊಳು

ಬಿಡು ಬಿಡು ಬಾಹ್ಯದೊಳು

ಬಿಡು ಬಿಡು ಬಾಹ್ಯದೊಳು ಡಂಭವ
ಮಾನಸದೊಳು ಎಡೆಬಿಡದಿರು ಶಂಭುವ
ಮಾನಸದೊಳು ವಂಚಿಸಿ ಹೊರಗೆ ನೀ ಕೀರ್ತಿಯ
ಪಡೆದರೆ ಶಿವ ನಿನಗೊಲಿಯನು ಮರುಳೆ||

ಜನಕಂಜಿ ನಡೆಕೊಂಡರೇನುಂಟು ಲೋಕದಿ
ಮನಕಂಜಿ ನಡೆಕಂಬುದೇ ಚಂದ|
ಜನರೇನ ಬಲ್ಲರು ಒಳಗಾಗೋ ಕೃತ್ಯವ
ಮನವರಿಯದ ಕಳ್ಳತನವಿಲ್ಲವಲ್ಲ||

ಮನದಲಿ ಶವ ತಾ ಮನೆಮಾಡಿಕೊಂಡಿಹ
ಮನಮೆಚ್ಚಿ ನಡೆದರೆ ಶವ ತಾ ಮೆಚ್ಚುವ|
ಮನಕಂಜಿ ನಡೆಯದೆ ಜನಕಂಜಿ ನಡೆದರೆ
ಮನದಾಣ್ಮ ಗುರುಸಿದ್ಧ ಮರೆಯಾಗೋನಲ್ಲ||

—ಸರ್ಪಭೂಷಣ ಶಿವಯೋಗಿ

By | 2015-04-17T06:29:21+00:00 April 17th, 2015||0 Comments

About the Author:

Leave A Comment