+91 9611100374|admin@indiaforyou.in

ಬರಿದೆ ಹೋಯಿತು

//ಬರಿದೆ ಹೋಯಿತು

ಬರಿದೆ ಹೋಯಿತು

ಬರಿದೆ ಹೋಯಿತು ಹೋಯಿತು ಹೊತ್ತು|
ನರ ಜನ್ಮ ಸ್ಥಿರವೆಂದು ನಾನಿದ್ದೆನೊ ರಂಗ||

ಆಸೆ ಎಂಬುದು ಎನ್ನ ಕ್ಲೇಶಪಡಿಸುತಿದೆ
ಗಾಸಿಯಾದೆನೊ ಹರು ನಾರಾಯಣ|
ವಾಸುದೇವನೆ ನಿನ್ನ ಧ್ಯಾನವ ಮಾಡದೆ
ನಾಶವಾಯಿತು ಜನ್ಮ ಮೋಸಹೋದೆನು ಕೃಷ್ಣ||

ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ
ಮರುಳುತನದಲಿ ಮತಿಹೇನನಾದೆ|
ನೆರೆ ನಂಬೆದೆನೊ ನಿನ್ನ ಕರುಣದಿಂದಲಿ ಎನ್ನ
ಮರೆಯದೆ ಸಲಹಯ್ಯ ಪುರಂದರವಿಟ್ಠಲ||

—-ಪುರಂದರದಾಸ

By | 2015-04-16T11:03:34+00:00 April 16th, 2015||0 Comments

About the Author:

Leave A Comment