+91 9611100374|admin@indiaforyou.in

ಬಂದು ನಿಂದಿಹ ನೋಡಿ

Home//ಬಂದು ನಿಂದಿಹ ನೋಡಿ

ಬಂದು ನಿಂದಿಹ ನೋಡಿ

ಬಂದು ನಿಂದಿಹ ನೋಡಿ ಭೂತಳದಿ ವೆಂಕಟ
ಇಂದಿರೆಯ ಒಡಗೂಡಿ ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ ಆಮಂದಗೂಡಂ||

ವಂದಿಸುತ ಮನದೊಳಗೆ ಇವನಡಿ
ದ್ವಂದ್ವ ಭಜಿಸಲು ಬಂದ ಭಯಹರ
ಇಂದುಧರ ಸುರವೃಂದನುತ
ಗೋವಿಂದ ಕರುಣಾಸಿಂಧು ಶ್ರೀಹರಿ||

ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ ಸನಕಾದಿನುತ
ಶೃಂಗಾರ ನಿಧಿ ಕೊರಳಲ್ಲಿ ಮುತ್ತಿನಲ್ಲಿ ಶೋಭಿಪ
ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ||

ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲಧಾರ
ಭುಜ ಕೇಯೂರಭೂಷಿತ
ಮಾರಪಿತ ಗುಣ ಮೋಹನಾಂಗ||

ಚಾರು ಪೀತಾಂಬರ ಕಟೀ ಕರ-ವೀರ ಕಲ್ಹಾರಾದಿ ಪೂವಿನ
ಹಾರ ಕೊರಳೊಳು ಎಸೆವುತಿರೆ ವದ-
ನಾರವಿಂದನು ನಗುತ ನಲಿಯುತ||
ಎಲ್ಲ ಭಕುತರಭೀಷ್ಟ ಕೊಡುವುದಕೆ ತಾ ಕೈ-
ವಲ್ಯಸ್ಥಾನವ ಶೇಷಾದ್ರಿಮಂದಿರದಲ್ಲಿ
ಲೋಲುಪ ದಿಟ್ಟ ಸೌಭಾಗ್ಯನಿಧಿಗೆದುರಿಲ್ಲ
ಭುಜಬಲಪುಷ್ಪ ಕಸ್ತೂರುಯಿಟ್ಟ||

ಚೆಲ್ವಫಣೆಯಲಿ ಶೋಭಿಸುವ ಸಿರಿ
ವಲ್ಲಭನ ಗುಣ ಪೊಗಳದಿಹ ಜಗ
ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾರಿ||

ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹು ಮಾಂಗಲ್ಯ ಹೃದಯನು ಸೃಷ್ಟಿಗೆ
ಉಲ್ಲಾಸ ಕೊಡುತಲಿ ಚಂದದಿಂದಲಿ||

ಪದಕ ಕೌಸ್ತುಭಧಾರ ಸರಿಗೇಯ ಕಂದರ
ಸುದರುಶನಧರ ಧೀರ ಸುಂದರ ಮನೋಹರ
ಪದಯುಗದಿ ನೂಪೂರ ಇಟ್ಟಿಹನು ಸನ್ಮುನಿ
ಹೃದಯಸ್ಥಿತ ಗಂಭೀರ ಬಹುದಾನಶೂರ||

ವಿಧಿಭವಾದ್ಯರ ಪೊರೆವ ದಾತನು
ತುದಿಮೊದಲು ಮಧ್ಯಮವಿರಹಿತನು
ಉದುಭವಾದಿಗಳೀವ ಕರ್ತನು
ತ್ರಿದಶ ಪೂಜಿತ ತ್ರಿಭುವನೇಶ||

ಸದುವಿಲಾಸದಿ ಸ್ವಾಮಿ ತೀರ್ಥದಿ
ಉದಿಸುತಿರೆ ಸಿರಿಮಹಿಳೆ ಸಹಿತದಿ
ಪದುಮನಾಭ ಪುರಂದರ ವಿಟ್ಠಲ
ಮುದದಿ ಬ್ರಹ್ಮೋತ್ಸವದಿ ಮೆರೆಯುತ||
—ಪುರಂದರದಾಸ

By | 2015-04-16T12:37:16+00:00 April 16th, 2015||0 Comments

About the Author:

Leave A Comment