+91 9611100374|admin@indiaforyou.in

ನೋಡಿರಣ್ಣ ನೀವೆಲ್ಲ ಬಂದು

Home//ನೋಡಿರಣ್ಣ ನೀವೆಲ್ಲ ಬಂದು

ನೋಡಿರಣ್ಣ ನೀವೆಲ್ಲ ಬಂದು

ನೋಡಿರಣ್ಣ ನೀವೆಲ್ಲ ಬಂದು ಈ ನೂತನ ಮಾನವನ|
ತ್ಯಾಗ-ವಿವೇಕದ ಚೀಲಗಳೆರಡನು ಹೆಗಲಲಿ ಹೊತ್ತಿಹನ||

ಗಂಗೆಯ ದಡದಲಿ ಹೊರಳುತ ತಾಯೀ ಎನ್ನುತ ಕೂಗುವನು|
ಕಾಣದೆ ನಿನ್ನನು ದಿನಗಳುರುಳುತಿವೆ ಎನ್ನುತ ಮರುಗುವನು||

ನಂಬದ ನೆಚ್ಚದ ಮಂದಮತಿಗಳಿಗೆ ಸರಳಕಥೆಯ ಹೇಳಿ|
ಕಾಳಿಯು ಕೃಷ್ಣನು ಒಂದೇ ಎನ್ನುತ ಸಾರುತಿಹನು ಕೇಳಿ||

ಅಕ್ವಾ-ವಾಟರ್-ಪಾನಿ-ವಾರಿಗಳು ನೀರಿಗೊಂಬೆ ಹೆಸರು|
ಅಲ್ಲಾ-ಜೀಸಸ್-ಮೋಸೆಸ್-ಕಾಳಿಯರು ಪರಬ್ರಹ್ನನುಸಿರು||

ಪಂಡಿತ-ಪಾಮರ-ಬಡವನು-ಬಲ್ಲಿದ ಭೇದ ತೋರಲಿಲ್ಲ|
ಜಾತಿಮತಗಳಾ ರೀತಿನೀತಿಗಳ ಮನಕೆತಾರಲಿಲ್ಲ||

ದಿವ್ಯೋನ್ಮಾದದಿ ಬಾಹುಗಳೆರಡನು ಬೀಸಿ ಕರೆಯುತಿಹನು|
ತಾಮಸಗೈಯದೆ ಎಲ್ಲರು ಬೇಗನೆ ಬನ್ನಿರೆನ್ನುತಿಹನು||

ಜಗದ ಜನಗಳಿಗೆ ಕೃಪೆಯನು ತೋರಲು ಕಾತರಗೊಂಡಿಹನು|
ಭವಸಾಗರವನು ದಾಟಿಸೆ ನೌಕೆಯ ತಂದು ಕಾಯುತಿಹನು||

—-ಮುರಳೀಧರ

By | 2015-04-16T07:38:38+00:00 April 16th, 2015||0 Comments

About the Author:

Leave A Comment