+91 9611100374|admin@indiaforyou.in

ನೀನಲ್ಲದಿನ್ನಾರು

//ನೀನಲ್ಲದಿನ್ನಾರು

ನೀನಲ್ಲದಿನ್ನಾರು

ನೀನಲ್ಲದಿನ್ನಾರು ಚಿರಬಂಧು ಎನಗೆ
ನಿನ್ನನ್ನೆ ಕರೆಯುತಿಹೆ ಹೃದಯದೇಗುಲಕೆ||

ಕಾತರದ ಅಳಲಿನಲಿ ಪರಿಪೂತ ಹೃದಯವದು
ಕ್ಷೇತಿರವೆನೆ ಆಗಿಹುದು ದಕ್ಷಿಣೇಶ್ವರವು|
ಜನ್ಮಜನ್ಮಾಂತರದ ಸಂಸ್ಕಾರತರುರಾಜಿ
ಪಂಚವಟಿಯಂದದಲಿ ಮಿಗೆ ಒಪ್ಪುತಿಹುದು||

ಹಗಲಿರುಳು ಎನ್ನೆದೆಯ ಹಂಬಲಿನ ಹೊನಲದುವೆ
ಜಗವ ಪಾವನಗೈವ ಗಂಗೆಯಾಗಿಹುದು|
ಜೀವಿಗಳ ಎದೆಯಲ್ಲಿ ಅನವರತ ನೆಲೆಸಿರುವ
ದೇವತೆಯೆ ಇಲೀಗ ಮಾತೆ ಭವತಾರಿಣೀ||

ಹೇ ದಿವ್ಯ ಅರ್ಚಕನೆ ಪಂಚವಟಿಪ್ರಿಯನೆ
ಭವತಾರಿಣೀತನಯ ಸುರನದಿಯ ಭಕ್ತ|
ಬಂದಿಲ್ಲಿ ಎಚ್ಚರಿಸು ಪ್ರೇಮಮಯಿ ಜನನಿಯನು
ಬಂಧನವು ಹರಿಯುವುದು ಮಾತೆಯೊಲುಮೆಯಲಿ||

—–ಸ್ವಾಮಿ ತದ್ರೂಪಾನಂದ

By | 2015-04-16T06:43:21+00:00 April 16th, 2015||0 Comments

About the Author:

Leave A Comment