+91 9611100374|admin@indiaforyou.in

ನಾನಿನ್ನೊಳನ್ಯ ಬೇಡುವುದಿಲ್ಲ

Home//ನಾನಿನ್ನೊಳನ್ಯ ಬೇಡುವುದಿಲ್ಲ

ನಾನಿನ್ನೊಳನ್ಯ ಬೇಡುವುದಿಲ್ಲ

ನಾನಿನ್ನೊಳನ್ಯ ಬೇಡುವುದಿಲ್ಲ|
ಹೃದಯಕಮಲದೊಳು ನಿಂದಿರು ಹರಿಯೆ||

ಸಿರ ನಿನ್ನ ಚರಣಕೆ ಎರಗಲಿ| ಎನ್ನ
ಚಕ್ಷು ಸದಾ ನಿನ್ನ ನೋಡಲಿ ಹರಯೆ|
ಕರ್ಣ ಗೀತಂಗಳ ಕೇಳಲಿ| ನಿನ್ನ
ನಿರ್ಮಾಲ್ಯವ ನಾಸಘ್ರಾಣಿಸಲಿ||

ನಾಲಿಗೆ ನಿನ್ನನು ಕೊಂಡಾಡಲಿ|
ಕರಗಳೆರಡು ನಿನ್ನನರ್ಚಿಸಲಿ|
ಚರಣ ತೀರ್ಥಯಾತ್ರೆ ಮಾಡಲಿ| ಎನ್ನ
ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೆ||

ಬುದ್ಧಿಯು ನಿನ್ನೊಳು ಬೆರೆಯಲಿ ಹರಿಯೆ|
ಚಿತ್ತ ನಿನ್ನೊಳು ಸ್ಥಿರವಾಗಲಿ|
ಭಕ್ತಜನರಸಂಗವಾಗಲಿ| ಪರಂದರ-
ವಿಟ್ಠಲನೆ ಇಷ್ಟೇ ದಯಮಾಡೊ

—ಪುರಂದರದಾಸ

By | 2015-04-15T11:53:06+00:00 April 15th, 2015||0 Comments

About the Author:

Leave A Comment