+91 9611100374|admin@indiaforyou.in

ನಾನಾರ ದೂಷಿಸಲಿ

Home//ನಾನಾರ ದೂಷಿಸಲಿ

ನಾನಾರ ದೂಷಿಸಲಿ

ನಾನಾರ ದೂಷಿಸಲಿ, ನಾನೆ ತೋಡಿದ ಕೂಪ-
ದಾಳದಲಿ ನಾನಾಗಿ ಮುಳುಗುತಿಹೆನು|
ಅರಿವರ್ಗಗಳ ಹಿಡಿದು ನಿನ್ನ ಸುಕ್ಷೇತ್ರದಲಿ
ನಾನೆ ಈ ಬಾವಿಯನು ತೋಡಿರುವೆನು|
ಕಾಲರೂಪದ ಕರಿಯ ನೀರೆದ್ದು ನುಗ್ಗುತಿದೆ
ಓ ತಾಯಿ ನಾ ನಿನಗೆ ಶರಣೆನುವೆನು|

ನಾನೆಯೇ ನನಗೆ ಹಗೆ, ಹೇಗೆ ತಡೆಯಲಿ ಹೇಳು
ಮೇಲೆದ್ದು ನುಗ್ಗುವೀ ಕಾಳಜಲವ
ಎನ್ನ ಎದೆಯುದ್ದಕೂ ತುಂಬಿಕೊಂಡಿತು ನೀರು,
ನೀನೊಬ್ಬಳೇ ರಕ್ಷೆ, ನಿನ್ನೊಳಗೆ ಈ ಭಿಕ್ಷೆ,
ದಾಟಿಸಾಚೆಯು ದಡಕೆ ಈ ಶಿಶುವನು|

—ವಚನವೇದ

By | 2015-04-15T11:29:36+00:00 April 15th, 2015||0 Comments

About the Author:

Leave A Comment