+91 9611100374|admin@indiaforyou.in

ನನ್ನ ಹೃದಯದ ದಿವ್ಯ

Home//ನನ್ನ ಹೃದಯದ ದಿವ್ಯ

ನನ್ನ ಹೃದಯದ ದಿವ್ಯ

ನನ್ನ ಹೃದಯದ ದಿವ್ಯಸೂತ್ರಧಾರಿಣಿ ನೀನು
ಮಡಿಲ ತೊಟ್ಟಿಲೊಳಿಟ್ಟು ಪಾಲಿಸಿರುವೆ|
ನಾನಪಾತ್ರನು ತಾಯಿ, ನಿನ್ನ ಒಲವಿನ ಕೃಪೆಗೆ
ಆದರೂ ಎನಿತೊಂದು ಕರುಣೆ ನಿನಗೆ||

ನನ್ನ ಮೇಲೆನಿತೊಂದು ವಾತ್ಸಲ್ಯವಿದೆ ನಿನಗೆ
ನೇವರಿಸಿ ಕೈಹಿಡಿದು ನಡೆಸುತಿರುವೆ|
ಮೃದುನುಡಿಗಳಮೃತವನು ಕಿವಿಗಳಿಗೆ ಕರೆಯುತ್ತ
ದಿವ್ಯವಧುವನು ನನಗೆ ಕುಡಿಸುತಿರುವೆ||

ದೋಷವರಸದ ಹಿರಿಯ ತಾಯ್ತನದ ಮೂರ್ತಿ ನೀ
ಕಷ್ಟಸಂಕಟದಿಂದ ರಕ್ಷಿಸಿರುವೆ|
ನಾನು ನಿನ್ನವನೆಂಬ, ನೀನು ನನ್ನವಳೆಂಬ
ಹಿರಿಯ ತತ್ತ್ವವನೀಗ ಅರಿಯುತಿರುವೆ||

ಓ ತಾಯಿ ನಾ ನಿನ್ನ ಹಾಲುಂಡು ಪುಷ್ಟಿಯಲಿ
ನಿನ್ನ ಆಣತಿಯಂತೆ ಋಜುಪಥದಲಿ|
ನಡೆನಡೆದು ಭಕ್ತಿಯಲಿ ಜೈ ಬ್ರಹ್ಮಮಯಿ ಎಂದು
ಹಾಡಿ ಕುಣಿಯುವೆನಿನ್ನು ದಿನದಿನದಲಿ||

—ವಚನವೇದ

By | 2015-04-15T10:52:34+00:00 April 15th, 2015||0 Comments

About the Author:

Leave A Comment