+91 9611100374|admin@indiaforyou.in

ನನ್ನಪರಾಧವು ಏನೆಲೆ ದೇವ

//ನನ್ನಪರಾಧವು ಏನೆಲೆ ದೇವ

ನನ್ನಪರಾಧವು ಏನೆಲೆ ದೇವ

ನನ್ನಪರಾಧವು ಏನೆಲೆ ದೇವ
ಎನ್ನನ್ನು ಕಾಯದೆ ಈಯುವೆ ನೋವ
ಭಾರವೆ ನಾನು ಗೋವರ್ಧನಗಿರಿ-
ಧಾರಿಯು ಅಲ್ಲವೆ ನೀ ಹೇ ಶ್ರೀಹರಿ||

ಕೀರುತಿ ನಿನ್ನದು ಗಜೇಂದ್ರಮೋಕ್ಷದ
ಮಾರುತಿಯಾಶ್ರಯ ನಿನ್ನಯ ಪಾದ
ಪರಮಪುರುಷ ನೀ ಕೊಡು ತವ ಮೋದ
ಪರುಸಮಣಿಯೊಲು ಸರ್ವಾಭೇದ||

ದೀನಬಂಧು ನೀ ದೇವದೇವ ನೀ
ಮಾನಘನನು ನೀ ಧರ್ಮಾತ್ಮನು ನೀ
ಜ್ಞಾನಧನರು ಗುಣಗಾನವ ಗೈಯಲು
ಎನ್ನನ್ನು ರಕ್ಷಿಸಲೇಕೀ ದಿಗಿಲು||

—ಸ್ವಾಮಿ ಹರ್ಷಾನಂದ

By | 2015-04-15T10:49:01+00:00 April 15th, 2015||0 Comments

About the Author:

Leave A Comment