+91 9611100374|admin@indiaforyou.in

ದೇವದೇವನ ನಿಜವನರಿಯಲು

Home//ದೇವದೇವನ ನಿಜವನರಿಯಲು

ದೇವದೇವನ ನಿಜವನರಿಯಲು

ದೇವದೇವನ ನಿಜವನರಿಯಲು
ಮನವು ತೊಳಲುತ ಬಳಲಿದೆ|
ಬೀಗಮುದ್ರೆಯನಿಟ್ಟ ಕೋಣೆಯೊ-
ಳಲೆವ ಮರುಳನ ತೆರನಿದೆ||

ದಿವ್ಯ ಪ್ರೇಮಕೆ ದೊರೆವನವನು
ಶ್ರದ್ಧೆಗಲ್ಲದೆ ಒಲಿಯನು|
ವೇದಶಾಸ್ತ್ರ ಪುರಾಣದರ್ಶನ-
ದಾಚೆಗೇ ನಿಂತಿರುವನು||

ಭಕ್ತಿಗೊಲಿಯುವ ಹೃದಯದಮೃತಾ-
ನಂದರೂಪನು ಎಂಬರು|
ಇದನರಿತೆ ಆ ಯೋಗಿವರ್ಯರು
ಯುಗಯುಗವು ತಪಗೈದರು||

ಭಕ್ತಿಯೆಚ್ಚರಗೊಲಲು ಎದೆಯಲಿ
ಅವನೆ ನಿನ್ನನು ಸೆಳೆವನು|
ಈ ರಹಸ್ಯವ ಜಗದ ಸಂತೆಯ
ಜನ ಸಮೂಹಕೆ ತಿಳಿಸೆನು||

ಶ್ರೀ ಪ್ರಸಾದನು ನುಡಿವನೀತೆರ
ಮಾತೃಭಾವದಿ ನೆನೆವೆನು|
ನನ್ನ ಸೂಚನೆಯರಿತು ನೀವೇ
ತಿಳಿಯಿರಾತನ ನಿಜವನು||

—-ವಚನವೇದ

By | 2015-04-15T08:10:20+00:00 April 15th, 2015||0 Comments

About the Author:

Leave A Comment