+91 9611100374|admin@indiaforyou.in

ದಯಮಾಡೋ ರಂಗಾ

Home//ದಯಮಾಡೋ ರಂಗಾ

ದಯಮಾಡೋ ರಂಗಾ

ದಯಮಾಡೋ ರಂಗಾ ದಯಮಾಡೋ ಕೃಷ್ಣ
ದಯಮಾಡೋ ನಿನ್ನ ದಾಸ ನಾನೆಂದು||

ಹಲವು ಕಾಲದಿ ನಿನ್ನ ಹಂಬಲು ಎನಗೆ|
ಒಲಿದು ಪಾಲಿಸಬೇಕೊ ವಾರಿಜನಾಭ||

ಇಹಪರಗತಿ ನೀನೆ ಇಂದಿರಾರಮಣ
ಸಹಾಯ ನಿನ್ನದೇ ಸದಾ ತೋರು ಕರುಣಾ||

ಕರಿರಾಜವರದನೆ ಕಂದರ್ಪನಯನ|
ಹರಿ ಸಾರ್ವಭೌಮ ಶ್ರೀ ಪುರಂದರವಿಟ್ಠಲ||

–ಪುರಂದರದಾಸ

By | 2015-04-15T07:29:25+00:00 April 15th, 2015||0 Comments

About the Author:

Leave A Comment