+91 9611100374|admin@indiaforyou.in

ತಾಯಿ ದುರ್ಗೆಯ ನಿಜವನರಿಯುವ

Home//ತಾಯಿ ದುರ್ಗೆಯ ನಿಜವನರಿಯುವ

ತಾಯಿ ದುರ್ಗೆಯ ನಿಜವನರಿಯುವ

ತಾಯಿ ದುರ್ಗೆಯ ನಿಜವನರಿಯುವ
ದೀರರಾರೋ ಜಗದೊಳು|
ಆರು ದುಶನ ವೇದಶಾಸ್ತ್ರ
ಪುರಾಮವರಿಯದು ಅವಳನು||

ಯೋಗಿಹೃದಯದ ದಿವ್ಯನಿತ್ಯಾ-
ನಂದರೂಪಿಣಿ ಆಕೆಯು|
ತನ್ನ ಆನಂದದಲಿ ತಾನೇ
ಜೀವರೆದೆಯೊಳಗಿರುವಳು||

ಸಕಲಬ್ರಹ್ಮಾಂಡವನು ಬಸಿರಲಿ
ಧರಿಸಿ ನಿತ್ಯವು ಪೊರೆವಳು|
ಮೂಲಾಧಾರ ಸಹಸ್ರಾರದಿ
ಮುನಿಗಳವಳನು ನೆನೆವರು||

ಶಿವನ ಹೊರತಿನ್ನಾರು ಅರಿಯರು
ಅವಳ ದಿವ್ಯಸ್ವರೂಪವ|
ಪದ್ಮವನದಲಿ ಹಂಸರೂಪನ
ಜೊತೆಗೆ ನಲಿಯುವ ಮಾಟವ||

ಕಡಲನೀಜುವೆನೆಂಬ ಮರುಳನ
ಕಲ್ಪನೆಗೆ ನಗುವಂದದಿ|
ಇಂಥ ತಾಯಿಯ ತಿಳಿದೆನೆಂದರೆ
ಶ್ರೀಪ್ರಸಾದನು ನಗುವನು||

ಕುಬ್ಜನಾದವ ಸುಗಿಲಚಂದ್ರನ
ಹಿಡಿವ ಯತ್ನದ ತೆರದಲಿ|
ಭುದ್ಧಿಯರಿತರು ಹೃದಯವರಿಯದು
ತಾಯಿ ದುರ್ಗೆಯ ನಿಜವನು||

—ವಚನವೇದ

By | 2015-04-15T06:56:45+00:00 April 15th, 2015||0 Comments

About the Author:

Leave A Comment