+91 9611100374|admin@indiaforyou.in

ಜೇನಿನ ಗೂಡೊಳು

//ಜೇನಿನ ಗೂಡೊಳು

ಜೇನಿನ ಗೂಡೊಳು

ಜೇನಿನ ಗೂಡೊಳು ಹುದುಗಿಹ ಮಧುವೋಲ್
ದೇವನ ಹೃದಯದಿ ಹುದುಗಿಹ ಕರುಣೆಯು|
ದೀನರ ಆರ್ತರ ಕೂಗಿನ ಹೊಡೆತಕೆ
ಶಾರದೆ-ರೂಪದಿ ಸೂಸಿತು ಹರಿಯಿತು||

ಮಾನಸ-ಸರಸಿಜ-ಮಂದಾಕಿನಿ-ಜಲ
ಭಾರತ-ಭೂಮಿಯ ಪಾವನಗೈದರೆ|
ಶಾರದರೂಪೀ ಕರುಣಾಗಂಗೆಯು
ವಿಶ್ವಕೆ ತಂಪಿನ ಸುಧೆಯನು ನೀಡಿತು||

ತನ್ನನು ಕಡಿವಗು ತಣ್ಣನೆ ನೆರಳನು
ನೀಡುವ ವೃಕ್ಷದ ತೆರದಲಿ ಶಾರದೆ|
ತನ್ನನು ಹಿಂಸಿಸಿ ಬಾಳಲು ಬಯಸಿದ
ಮೂರ್ಖರ ಮನ್ನಿಸಿ ಹರಸಿದಳಲ್ಲವೆ||

ಸರ್ವವಿದ್ಯೆಗಳ ಮೂರುತಿ ನೀನು
ಭೋಗದ ಮೋಕ್ಷದ ದಾತೆಯು ನೀನೇ|
ಎನ್ನಯ ಹೃದಯದಿ ನಿನ್ನಯ ಭಕ್ತಿಯ
ತುಂಬಿಸು ಕೂಡಲೆ ಕೃಪೆಯನು ತೋರುತ||

ನಾನೂ ನಿನ್ನಯ ಪುತ್ರನು ತಾಯೇ
ದುರುಳನು ಈತನು, ಪುತ್ರನೆ ಎನ್ನದಿರು|
ದುರುಲ ಕುವರರಿದ್ದರು ಈ ಲೋಕದಿ
ದುರುಲ ಮಾತೆಯನು ಎಂದಿಗು ಕಾಣೆವು||

ಹಗಲೂ ಇರುಳೂ ಪರರನು ಹಳಿಯುತ
ಬಾಲನು ಸವೆಸುತಲಿರುತಿಹ ಮರ್ತ್ಯರೆ
ಬನ್ನಿರಿ ಬನ್ನಿರಿ ಎಲ್ಲರು ಇಲ್ಲಿಗೆ
ಕೇಳಿರಿ ಜನನಿಯ ಚರಮಾದೇಸವ||

ಸತತವು ವ್ರಣವನೆ ಬಯಸುವ ಮಕ್ಷಿಕೆ,
ಮಧುವನನವರತ ಹೀರುವ ಮಧುಕರ-
ಆವುದು ಅನುಕರಣೀಯವು ಎಂಬುದ
ಅರಿಯುತ ಮಧುಮಯವಾಗಿಸಿ ಜೀವನ||

—-ಸ್ವಾಮಿ ಹರ್ಷಾನಂದ

By | 2015-04-14T12:51:25+00:00 April 14th, 2015||0 Comments

About the Author:

Leave A Comment