+91 9611100374|admin@indiaforyou.in

ಜಯ ಜಾನಕೀಕಾಂತ

Home//ಜಯ ಜಾನಕೀಕಾಂತ

ಜಯ ಜಾನಕೀಕಾಂತ

ಜಯ ಜಾನಕೀಕಾಂತ ಜಯ ಸಾಧುಜನವಿನುತ|
ಜಯತು ಮಹಿಮಾವಂತ ಜಯಭಾಗ್ಯವಂತ||

ದಶರಥಾತ್ಮಜ ವೀರ ದಶಕಂಠಸಂಹಾರ
ಪಶುಪತೀಶ್ವರಮಿತ್ರ ಪಾವನಚರಿತ್ರ|
ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ
ಅಸಮಸಾಹಸಶಿಕ್ಷ ಅಂಬುಜದಳಾಕ್ಷ||

ಸಾಮಗಾನವಿಲೋಲ ಸಾಧುಜನಪರಿಪಾಲ
ಕಾಮಿತಾರ್ಥವಿದಾತ ಕೀರ್ತಿಸಂಜಾತ|
ಸೋಮಸೂರ್ಯಪ್ರಕಾಶ ಸಕಲ ಲೋಕಾಧಿಶ
ಶ್ರೀಮಹಾರಘುವೀರ ಸಿಂಧುಗಂಭೀರ||

ಸಕಲಶಾಸ್ತ್ರವಿಚಾರ ಶರಣತನಮಂದಾರ
ವಿಕಸಿತಾಂಬುಜವದನ ವಿಶ್ವಮಯಸದನ|
ಸುಕೃತಮೋಕ್ಷಾಧೀಶ ಸಾಕೇತಪುರವಾಸ
ಭಕ್ತವತ್ಸರಾಮ ಪುರಂದರವಿಟ್ಠಲ||

—ಪುರಂದರದಾಸ

By | 2015-04-14T11:09:04+00:00 April 14th, 2015||0 Comments

About the Author:

Leave A Comment