+91 9611100374|admin@indiaforyou.in

ಜಯತು ಜಯತು ರಾಮಕೃಷ್ಣ

//ಜಯತು ಜಯತು ರಾಮಕೃಷ್ಣ

ಜಯತು ಜಯತು ರಾಮಕೃಷ್ಣ

ಜಯತು ಜಯತು ರಾಮಕೃಷ್ಣ ಜಯತು ಭುವನಮಂಗಲ
ಜಯತು ತಾಯಿ ಮಹಾಮಾಯಿ ಶಾರದೇ ಸುನಿರ್ಮಲ|
ಜಯತು ಶ್ರೀವಿವೇಕಾನಂದ ತಮವ ಕಳೆವ ಭಾಸ್ಕರ
ಶ್ರೀಗುರುವಿನ ಆತ್ಮಪುತ್ರ ಬ್ರಹ್ಮಾನಂದ ಸಾಗರ||

ಜಯತು ಜಯತಿ ಪ್ರೇಮಾನಂದ- ಪ್ರೇಮಾಮೃತ ಸ್ಂಚನ
ತ್ಯಾಗವ್ರತನೆ ಶಿವಾನಂದ ಗುರುಶಕ್ತಿಯ ದರ್ಶನ|
ಕಾಮನೆ ಗೆದ್ದ ಯೋಗಿ ಜಯತು ಯೋಗಾನಂದನೆ
ಧೀರ-ವೀರ ನಿರಂಜನನೆ ನಿನ್ನ ಪದಕೆ ವಂದನೆ||

ಗುರುಸೇವೆಯ ಮೂರ್ತರೂಪ ರಾಮಕೃಷ್ಣಾನಂದನೆ
ಅಕ್ಷರದಲಿ ನೆಲೆನಿಂದಿಹ ಅದ್ಭುತ ಆನಂದನೆ|
ತಾಪಸಿ ನೀ ಅಭೇದಾನಂದ ಜ್ಞಾನಮೂರ್ತಿ ಜಯ ಜಯ
ದೇಹಭಾವವಳಿದ ಯತಿ ತುರೀಯಾನಂದ ನಿರ್ಭಯ||

ತಾಯ ಹಿತವ ಸತತ ಕಾಯ್ದ ಶರಚ್ಚಂದ್ರ ವಾಸುಕಿ
ಗಂಗಾಧರನೆ ಜೀವಸೇವೆಯಲ್ಲಿ ಸಿವನ ಸಮ್ಮಖಿ|
ಜಯತು ಜಯತು ಹರಿಪ್ರಸನ್ನ ಪ್ರಸನ್ನಾತ್ಮ ಸಂತತ
ಶ್ರೀಗೋಪಾಲ ನಿನ್ನ ಇರವೆ ತಾಯ ಚರಣಕರ್ಪಿತ||

ಬಾಲಕನೊಲು ಸರಳ-ಶಾಂತ ಶ್ರೀಸುಬಬೋಧಾನಂದನೆ
ತಾಯ ಪದದಿ ತನ್ನಯ ನೀ ಶಾರದಾಪ್ರಸನ್ನನೆ|
ಕಥಾಮೃತದ ಹೊನಲ ತಂದ ಗುಪ್ತ ಶ್ರೀಮಹೇಂದ್ರನೆ
ಶ್ರದ್ಧೆಬಲದಿ ಕೊಳೆಯ ತೊಳೆದ ಶ್ರೀಗಿರೀಶಚಂದ್ರನೆ||

ತ್ಯಾಗದುರಿಯ ಹೆಡೆಯೆತ್ತಿದ ದುರ್ಗಾಚರಣನಾಗನೆ
ಸೇವೆಯಲ್ಲೆ ಸಾರ್ಥಕತೆಗೆಸಂದಿಹ ಬಲರಾಮನೆ|
ನಿಮ್ಮನೆನಹು ನಮ್ಮ ಮನದವ ಬೆಳಗುತಿರಲಿ ಸರ್ವದಾ
ನೀವೆ ನಮ್ಮ ನಿತ್ಯಸ್ಫೂರ್ತಿ–ಸತ್ಯಸಿರಿಯ ಸಂಪದ||

—ಮುರಳೀಧರ

By | 2015-04-14T12:21:44+00:00 April 14th, 2015||0 Comments

About the Author:

Leave A Comment