+91 9611100374|admin@indiaforyou.in

ಜಯತು ಗುರು ವಿವೇಕಾನಂದ

Home//ಜಯತು ಗುರು ವಿವೇಕಾನಂದ

ಜಯತು ಗುರು ವಿವೇಕಾನಂದ

ಜಯತು ಗುರು ವಿವೇಕಾನಂದ
ಜಯತು ಸ್ವಾಮೀಜೀ||

ರಾಮಕೃಷ್ಣಹೃದಯಕಿರಣ
ನಿನ್ನ ಪದಕೆ ಕೋಟಿ ನಮನ||

ರಾಮಕೃಷ್ಣಹೃದಯಕಿರಣ
ನಿನ್ನ ಪದಕೆ ಕೋಟಿ ನಮನ||

ಬಂಧ ಮುಕ್ತಿ ಪಡೆದ ಬಳು ಉಲ್ಲಾಸದಿ ನಲಿದಿದೆ
ದೀನದಲಿತರೆದೆ ನೆಲದಿ ಹೊಸ ಭರವಸೆ ಚಿಮ್ಮಿದೆ||

ಮೂಕ ಮೂಢ ಜನರ ಮುಖದಿ
ನುಡಿಯ ಬೆಳಕು ಅರಳಿದೆ
ಮೃತಸಮಷ್ಟಿ ಲೋಕಹೃದಯ
ಜೀವದುಂಬಿ ಮಿಡಿದಿದೆ||

ತಮ ಸಮುದ್ರ ಮಥಿಸಿತಂದ
ಮಹಾಮಂತ್ರ ನೀಡಿದೆ
ಅಭೀ ಎಂಬ ಆಭಯ ನುಡಿಯ
ಆತ್ಯನಿಧಿಯ ಮಾಡಿದೆ||

ಮಹಾಮಾಯೆಯೆಸೆದ ಜಾಲ
ಆಯಿತೀಗ ನಿಷ್ಫಲ
ಎಲ್ಲ ಬಗೆಯ ದ್ವಂದ್ವಭಾವ-
ವಳಿದು ಬಂತು ಸಿವಫಲ|

—-ಪ್ರಭುಪ್ರಸಾದ್

By | 2015-04-14T12:10:53+00:00 April 14th, 2015||0 Comments

About the Author:

Leave A Comment