+91 9611100374|admin@indiaforyou.in

ಗೋವರ್ಧನ ಗಿರಿಧರ ಗೋವಿಂದ

//ಗೋವರ್ಧನ ಗಿರಿಧರ ಗೋವಿಂದ

ಗೋವರ್ಧನ ಗಿರಿಧರ ಗೋವಿಂದ

ಗೋವರ್ಧನ ಗಿರಿಧರ ಗೋವಿಂದ
ಗೋಕುಲಪಾಲಕ ಪರಮಾನಂದ|
ಶ್ರೀವತ್ಸಾಂಕಿತ ಶ್ರೀಕೌಸ್ತುಭಧರ
ಭಾವಕ ಭಯಹರ ಪಾಹಿ ಮುಕುಂದ||

ಆನಂದಾಮೃತವಾರಿಧಿ ಖೇಲ
ಅಲಘು ಪರಾಕ್ರಮ ಅನುಪಮಶೀಲ|
ಶ್ರೀನಂದಾತ್ಮಜ ಶ್ರಿತಜನಪಾಲ
ಶ್ರೀಕರಕಿಸಲಯ ಲಾಲನಲೋಲ||

ಪಾಟಿತ ಸುರರಿಪು ಪಾದಪವೃಂದ
ಪಾವನಚರಿತಪರಾಮೃತಕಂದ|
ನಾಟ್ಯರಸೋತ್ಕಟ ನಾನಾಭರಣ
ನಾರಾಯಣತೀರ್ಥ ವಂದಿತಚರಣ||

–ನಾರಾಯಣತೀರ್ಥ

By | 2015-04-14T07:49:28+00:00 April 14th, 2015||0 Comments

About the Author:

Leave A Comment