+91 9611100374|admin@indiaforyou.in

ಕ್ಷೀಣಪ್ರಾಣ ಹೀನತ್ರಾಣ

Home//ಕ್ಷೀಣಪ್ರಾಣ ಹೀನತ್ರಾಣ

ಕ್ಷೀಣಪ್ರಾಣ ಹೀನತ್ರಾಣ

ಕ್ಷೀಣಪ್ರಾಣ ಹೀನತ್ರಾಣ
ದೀನ ಭಾರತೀಯ ಜನಕೆ|
ಪ್ರಾಣ ಮಾನ ದಾನಗೈದ
ಮಾನವೇಂದ್ರ ಸ್ವಾಮುಯೇ||

ಸ್ವರಿಸಿ ನಿಮ್ಮ ಹಿರಿಯ ಪದವ
ಧರಿಸಿ ಹೆಮ್ಮೆ ಧೈರ್ಯ ಬಲವ|
ಸಿರಿಯ ಆತ್ಮ ನೀವು ಎನುತ
ಮೊರೆದ ಅಭಯವಾಣಿಯೇ||

ತ್ಯಾಗ ಸೇವೆ ನಿಮ್ಮ ಮಾಡ
ಭಾಗ್ಯವೆಂದು ನಂಬಿ ನಡೆಯೆ|
ಭೋಗ ಯೋಗ ಸಿದ್ಧವೆಂದ
ಯೋಗಿವರನೆ ವಂದಿಪೆ||

—-ಸ್ವಾಮಿ ಶಾಸ್ತ್ರಾನಂದ

By | 2015-04-14T06:41:08+00:00 April 14th, 2015||0 Comments

About the Author:

Leave A Comment