+91 9611100374|admin@indiaforyou.in

ಕ್ಷಾಂತಿ ಸಹನೆಯ

//ಕ್ಷಾಂತಿ ಸಹನೆಯ

ಕ್ಷಾಂತಿ ಸಹನೆಯ

ಕ್ಷಾಂತಿ ಸಹನೆಯ ಶಾಂತ ಶೀತಲ
ಕಾಂತಿಯಿಂದಲಿ ಬೆಳಗುವಾ ಶಶಿ|
ಅಂತರಂಗದ ಭಕುತಿ ಭೂಷಣ
ಸಂತರಾಜ್ಯದ ಚಕ್ರವರ್ತಿ||

ಗುರುವೆ ನಿನ್ನಯ ಪರಮ ದೈವನು
ಗುರುವಿನಾಣತಿ ಹಿರಿಯ ವೇದವು|
ಗುರುವಿಗಾಳ್ತನ ಚರಮ ಸಾದನ
ಗುರುವಿಗೋಸುಗ ಧರಿತಪ್ರಾಣವು||

ಕಾಮಕಾಂಚನ-ತ್ಯಾಗಿ ತಾಪಸಿ
ಪ್ರೇಮಪೂರಿತ ಕರ್ಮಯೋಗಿ|
ರಾಮಕೃಷ್ಣರ ದಿವ್ಯದಾಸ
ರಾಮಕೃಷ್ಣನಂದ ನಮಿಪೆವು||

–ಸ್ವಾಮಿ ಶಾಸ್ತ್ರಾನಂದ

By | 2015-04-14T06:31:42+00:00 April 14th, 2015||0 Comments

About the Author:

Leave A Comment