+91 9611100374|admin@indiaforyou.in

ಕೊಟ್ಟವರು ಸರಿಯೆ

Home//ಕೊಟ್ಟವರು ಸರಿಯೆ

ಕೊಟ್ಟವರು ಸರಿಯೆ

ಕೊಟ್ಟವರು ಸರಿಯೆ| ಕೊಡದೆ
ಬಿಟ್ಟವರು ಸರಿಯೆ||

ಇಕ್ಕಿದವರಿಗುಂಟು| ಮದದಲಿ
ಸೊಕ್ಕಿದರೇನುಂಟು|
ರಕ್ಕಸಾಂತಕ ಲಕುಮಿಪತಿಯ ಮರೆ-
ಪೊಕ್ಕಸಾಂತಕ ಶಿಷ್ಟಭಕಿತರಿಗೆ||

ದೆರೆಯಾದರು ಸರಿಯೆ| ನಮಗೆ
ತಿರುಕನಾದರು ಸರಿಯೆ|
ಸರಸವಿರಸದಿಂ ನುಡಿದರೇನು ನರ-
ದರಿಪದಕಮಲ ನಿರುತ ಭಜಿಪರಿಗೆ||

ಪುಟ್ಟಿಸಿದ ಪ್ರಭುವು| ನಮಗೆ
ಹೊಟ್ಟೆಗೆ ಕೊಡದಿಹನೆ|
ಬೆಟ್ಟದೊಡೆಯ ನಮ್ಮ ಪುರಂದರವಿಟ್ಠಲನ
ಗಟ್ಟಿಯಗಿ ನಂಬಿದ ಭಕುತರಿಗೆ||

—-ಪುರಂದರದಾಸ

By | 2015-04-14T06:28:15+00:00 April 14th, 2015||0 Comments

About the Author:

Leave A Comment