+91 9611100374|admin@indiaforyou.in

ಕೆಳಗಿಳಿದು ಹರಿಯುವುದೆ

Home//ಕೆಳಗಿಳಿದು ಹರಿಯುವುದೆ

ಕೆಳಗಿಳಿದು ಹರಿಯುವುದೆ

ಕೆಳಗಿಳಿದು ಹರಿಯುವುದೆ ಜಲದ ನಿಜಗುಣವಯ್ಯ
ತಳೆಯುವುದು ಮಲಿನತೆಯ ಕೊಲೆನೆಲದಿ ಹರಿಯುತ್ತ|
ಜಲನಿಧಿಯ ಸೇರಿ ತಾ ಬಲು ಕ್ಷಾರವಾಗತಲಿ
ಸಲಿಲಾರ್ಥಿ ಜನರಿಂಗೆ ನಲಸಮವಾಗುವುದು||

ಗಗನದಲ್ಲಿಹ ರವಿಯು ಜಗವನೆಲ್ಲವ ಬೆಳಗಿ
ಸಗರಜಲವನು ಕೂಡ ನಗುತ ಕರದಿಂದೆತ್ತಿ|
ವಿಗತದೋಷವ ಗೈದು ಮುಗಿಲರೂಪವ ಕೊಡುತ
ಜಗಕೆಲ್ಲ ಸವಿತರುವ ನಿಗೆ ಸೊಗದ ಮಳೆಕರೆವ||

ಜಲದವೊಲು ಎಮ್ಮ ಮನ ಕೆಳಮೊಗವು ಚಂಚಲವು
ನಲಿನಲಿದು ಕೃಪೆಯಿಂದ ಒಲಿದೆಮ್ಮ ಬಾಳ್ಗಳನು
ಜಲಮೂರ್ತಿ ಮೇಲೆತ್ತಿ ಸಲಹಯ್ಯ ಸ್ವಾಮಿ||

—ಸ್ವಾಮಿ ಶಾಸ್ತ್ರಾನಂದ

By | 2015-04-14T06:19:41+00:00 April 14th, 2015||0 Comments

About the Author:

Leave A Comment