+91 9611100374|admin@indiaforyou.in

ಕೃಷ್ಣನ ನೆನೆದರೆ

Home//ಕೃಷ್ಣನ ನೆನೆದರೆ

ಕೃಷ್ಣನ ನೆನೆದರೆ

ಕೃಷ್ಣನ ನೆನೆದರೆ ಕಷ್ಟ ಒಂದರಷ್ಟಿಲ್ಲ|
ಕೃಷ್ಣ ಎನಬಾರದೆ||
ನರಜನ್ಮ ಬಂದಾಗ ನಾಲಿಗೆ ಇದ್ದಾಗ
ಕೃಷ್ಣ ಎನಬಾರದೆ||
ಮಲಗೆದ್ದು ಮೈಮುರಿದು ಏಳುತಲೊಮ್ಮೆ|
ಕೃಷ್ಣ ಎನಬಾರದೆ||
ಸುಳಿದಾಡುತ ಮನೆಯೊಳಗಾದರು ಒಮ್ಮೆ|
ಕೃಷ್ಣ ಎನಬಾರದೆ||
ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ|
ಕೃಷ್ಣ ಎನಬಾರದೆ||
ದಾರಿಯ ನಡೆವಾಗ ಭಾರವ ಹೊರುಾಗ|
ಕೃಷ್ಣ ಎನಬಾರದೆ||
ನೀಗದಾಲೋಚನೆ ರೋಗೋಪದ್ರದಲೊಮ್ಮೆ|
ಕೃಷ್ಣ ಎನಬಾರದೆ||
ಪರಿಪರಿ ಕೆಲಸದೊಳೊಂದು ಕೆಲಸವೆಂದು|
ಕೃಷ್ಣ ಎನಬಾರದೆ||
ದುರಿತ ರಾಶಿಗಳನು ತರಿದು ಬಿಸಾಡಲು|
ಕೃಷ್ಣ ಎನಬಾರದೆ||
ಗರುಡವಾಹನ ಸಿರಿ ಪುರಂದರವಿಟ್ಠಲನ್ನೆ|
ಕೃಷ್ಣ ಎನಬಾರದೆ||

By | 2015-04-14T06:02:01+00:00 April 14th, 2015||0 Comments

About the Author:

Leave A Comment