+91 9611100374|admin@indiaforyou.in

ಕಲಿಯುಗದಲಿ ಹರಿನಾಮವ

Home//ಕಲಿಯುಗದಲಿ ಹರಿನಾಮವ

ಕಲಿಯುಗದಲಿ ಹರಿನಾಮವ

ಕಲಿಯುಗದಲಿ ಹರಿನಾಮವ ನೆನೆದರೆ
ಕುಲಕೋಟಿಗಳದ್ಧರಿಸುವವೋ ರಂಗಾ||

ಸುಲಭದ ಮುಕ್ತಿಗೆ ಸುಲಭನೆಂದೆನಿಸುವ
ಜಲರುಹನಾಭವ ನೆನೆ ಮನವೆ||

ಸ್ನಾನವನರಿಯೆನು ಮೌನವನರಿಯೆನು
ಧ್ಯಾನವನರಿಯೆನೆಂದೆನಬೇಡ|
ಜಾನಕಿವಲ್ಲಭ ದಶರಥನಂದನ
ಗಾನವಿನೋದನ ನೆನೆ ಮನವೆ||

ಅರ್ಚಿಸಲರಿಯೆನು ಮೆಚ್ಚಿಸಲರಿಯೆನು
ತುಚ್ಛನು ನಾನೆಂದೆನಬೇಡ|
ಏಚ್ಯತಾನಂತ ಗೋವಿಂದ ಮುಕುಂದನ
ಇಚ್ಛೆಯಿಂದ ನೀ ನೆನೆ ಮನವೆ||

ಜಪವೊಂದರಿಯೆನು ತಪವೊಂದರಿಯೆನು
ಉಪದೇಶವಿಲ್ಲೆಂದೆನಬೇಡ|
ಅಪಾರ ಮಹಿಮೆ ಶ್ರೀ ಪುರಂದರವಿಟ್ಠಲನ
ಉಪಾಯದಿಂದಲಿ ನೆನೆ ಮನವೆ||

—ಪುರಂದರದಾಸ

By | 2015-04-13T11:13:14+00:00 April 13th, 2015||0 Comments

About the Author:

Leave A Comment