+91 9611100374|admin@indiaforyou.in

ಕರುಣಿಸೋ ರಂಗಾ

Home//ಕರುಣಿಸೋ ರಂಗಾ

ಕರುಣಿಸೋ ರಂಗಾ

ಕರುಣಿಸೋ ರಂಗಾ ಕರುಣಿಸೋ
ಹಗಲು ಇರುಳೂ ನಿನ್ನ ಸ್ಮರಣೆ ಮರೆಯದಂತೆ||

ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲರಿಯೆ|
ಬಕವೈರಿಯಂತೆ ಧ್ಯಾನ ಮಾಡಲರಿಯೆ
ದೇವಕಿಯಂತೆ ಮುದ್ವಿಸಲರಿಯೆನೋ||

ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರೆಯಲರಿಯೆನೋ ಕರಿರಾಜನಂತೆ|
ವರಕಪಿಯಂತೆ ದಾಸ್ಯಮಾಡಲರಿಯೆ
ಸಿರಿಯಂತೆ ಸುಖವಿತ್ತು ಸೇವಿಸಲರಿಯೆನೋ||

ಬಲಿಯಂತೆ ದಾನವ ಕೊಡಲಾರೆನೊ ಭಕ್ತಿ-
ಛಲವನರಿಯೆನೋ ಪ್ರಹ್ಲಾದನಂತೆ|
ಒಲಿಸಲರಿಯೆನೋ ಅರ್ಜುನನಂತೆ ಸಕನಾಗಿ
ಸಲಹೋ ದೇವರ ದೇವ ಪುರಂದರಲಿಟ್ಠಲ||

—ಪುರಂದರದಾಸ

By | 2015-04-13T11:01:03+00:00 April 13th, 2015||0 Comments

About the Author:

Leave A Comment