+91 9611100374|admin@indiaforyou.in

ಕರುಣಾಕರ ನೀನೆಂಬುವುದೇತಕೋ

//ಕರುಣಾಕರ ನೀನೆಂಬುವುದೇತಕೋ

ಕರುಣಾಕರ ನೀನೆಂಬುವುದೇತಕೋ

ಕರುಣಾಕರ ನೀನೆಂಬುವುದೇತಕೋ
ಭರವಸೆಯಿಲ್ಲೆನಗೆ||

ಪರಿಪರಿಯಲಿ ಈ ನರಜನ್ಮವನಿತ್ತು
ತಿರುಗಿ ತಿರುಗಿ ಮನಕರಗಿಸುವುದ ಕಂಡು||

ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ
ಪೊರೆದವ ನೀನಂತೆ|
ಅರಿತು ವಿಚಾರಿಸಿ ನೋಡಲದೆಲ್ಲವು
ಪರಿಪರಿ ಕಂತೆಗಳಂತಿವೆ ಕೃಷ್ಣಾ||

ಕರುಣಾಕರ ನೀನಾದರೆ ಈಗಲೆ
ಕರಪಿಡಿದೆನ್ನನು ಹರಿ ಕಾಯೋ|
ಸರಸಿಜಾಕ್ಷನೆ ಬಾಧಿಪುದುಂಟೆ||

ಮರಣಕಾಲದಲಿ ಅಜಮಿಳಗೊಲಿದೆ
ಗರುಡಧ್ವಜನೆಂಬ ಬಿರುದಿನಿಂದ|
ವರಬಿರುದುಗಳು ಹಲಿಯಬೇಕಾದರೆ
ತ್ವರಿತದಿ ಕಾಯೋ ಪುರಂದರವಿಟ್ಠಲ||

—-ಪುರಂದರದಾಸ

By | 2015-04-13T10:36:35+00:00 April 13th, 2015||0 Comments

About the Author:

Leave A Comment