+91 9611100374|admin@indiaforyou.in

ಕಮಲವದನ ಕಲುಷಹರಣ

Home//ಕಮಲವದನ ಕಲುಷಹರಣ

ಕಮಲವದನ ಕಲುಷಹರಣ

ಕಮಲವದನ ಕಲುಷಹರಣ
ನಿನಗೆ ನಮನ ರಾಮಕೃಷ್ಣ||

ಧರಮಸ್ಥಾಪನ ನಿನ್ನಾಗಮನ
ಪರಮಪಾವನ ನಿನ್ನ ಭಜನ|
ಕೊಡುವೆ ನಿನಗೆ ಹೃದಯದಾಸನ
ಕಳೆಯೋ ಎನ್ನ ಜನುಮಮರಣ||

ಜಗದ ಜೀವನ ಪುಣ್ಯಕಥನ
ವಿಜಿತಮದನ ಕರಮ ದಹನ|
ರಚಿಸಿ ನೀನು ವಿಶ್ವಕವನ
ನಿಡುತಿರುವೆ ತವ ದರುಶನ||

ವಿಶ್ವಮೋಚನ ತವಗುಣಗಾನ
ಚಿತ್ತಶೋಧನ ನಿನ್ನನುಧ್ಯಾನ|
ನನ್ನದೆನುವ ತನುಮನಧನ
ನಿನಗೆ ಅರ್ಪಣ ಹೇ ಮ ಜೀವನ||

—ಸ್ವಾಮಿ ತದ್ರೂಪಾನಂದ

By | 2015-04-13T10:14:15+00:00 April 13th, 2015||0 Comments

About the Author:

Leave A Comment