+91 9611100374|admin@indiaforyou.in

ಕಂದಾ ಬೇಡವೋ

//ಕಂದಾ ಬೇಡವೋ

ಕಂದಾ ಬೇಡವೋ

ಕಂದಾ ಬೇಡವೊ ಮಣ್ಣು ತಿನ್ನಬೇಡ ತಿನ್ನಬೇಡವೊ||

ಕಂದಾ ಬೇಡವೊ ಮಣ್ಣು ತಿನ್ನಲಿಬೇಡ|
ಸುಂದರರಂಗನೆ ನಿನಗೆ ಹೊಟ್ಟೆ ನೋಯುವುದಯ್ಯ||

ಬೇಗನೆ ಏಳಯ್ಯ ಮಣ್ಣಾಟ ಬಿಡೊ ನೀನು|
ಜೋಗಿ ಬರುತಾನಲ್ಲಿ ಅಂಜಿಸುವುದಕೀಗ||

ತಾಯ ಮಾತನು ಒತ್ತಿ ಕರದಲಿ ಮಣ್ಣೆತ್ತಿ|
ಬಾಯಲಿ ಇಟ್ಟನು ಬಾಲಕೃಷ್ಣಯ್ಯನು||

ಪೆಟ್ಟು ಕೊಡುವೆ ನಿನಗೆ ಸಿಟ್ಟು ಬಹಳ ಇದೆ|
ಮುಟ್ಟಬೇಡೊ ಮಣ್ಣು ಬೆಣ್ಣೆ ತರುವೆನಯ್ಯ||

ಅಮ್ಮಯ್ಯ ಕೇಳೆಲೆ ಬಾಯಲಿ ಮಣ್ಣೆಲ್ಲ|
ಗುಮ್ಮನು ಬರಬೇಡ ಸುಮ್ಮನೆ ಇರುತೇನೆ||

ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು|
ಮಗುವಿನ ಬಾಯ ಶೋಧಿಸಿದಳು ಬೇಗನೆ||

ಬಾಯಲಿ ಕಂಡಳು ಹದಿನಾಲ್ಕು ತೋಕವ|
ಕಾಯ ಮರೆತಳಯ್ಯ ಮರುಳಿಗೆ ವಶಳಾಗಿ||

ಕಂದನು ನೀನಲ್ಲ ಕಂದರ್ಪಜನಕನೆ|
ಕಂದನೆ ನಿನ್ನ ಬಾಯ ಮುಚ್ಚಿಕೊಳ್ಳಯ್ಯ ಈಗ||

ಜಯವಾಗಲಿ ನಮ್ಮ ಕೃಷ್ಣರಾಯಗೆ ಬಹು|
ಜಯವಾಗಲಿ ಅವನ ಭಕ್ತರ ವೃಂದಕೆ||

ಲೀಲಾವಿನೋದ ಯಶೋದಾಬಾಲನು|
ಲೀಲೆ ತೋರಿದನಂದು ಪುರಂದರವಿಟ್ಠಲ||

—-ಪುರಂದರದಾಸ

By | 2015-04-13T13:06:25+00:00 April 13th, 2015||0 Comments

About the Author:

Leave A Comment