+91 9611100374|admin@indiaforyou.in

ಏನು ಧನ್ಯಳೊ ಲಕುಮಿ

//ಏನು ಧನ್ಯಳೊ ಲಕುಮಿ

ಏನು ಧನ್ಯಳೊ ಲಕುಮಿ

ಏನು ಧನ್ಯಳೊ| ಲಕುಮಿ| ಎಂಥಾ ಮಾನ್ಯಳೋ||

ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳು||

ಕೋಟಿಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ|
ಸಾಟಿಯಿಲ್ಲದೆ ಮಾಡಿ ಪೂರ್ಣ
ನೋಟದಿಂದ ಸುಖಿಸುತಿಹಳು||

ಛತ್ರ ಚಾಮರ ವಿಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು
ಚಿತ್ರಚರಿತನಾದ ಹರಿಯ
ನಿತ್ಯಸೇವೆ ಮಾಡುತಿಹಳು||

ಸರ್ವತ್ರದಿ ವ್ಯಪ್ತನಾದ
ಸರ್ವದೋಷರಹಿತನಾದ
ಶರ್ವವಂದ್ಯನಾದ ಪುರಂದರ
ವಿಟ್ಠಲನ್ನ ಸೇವಿಸುಳು||

—-ಪುರಂದರದಾಸ

By | 2015-04-13T08:04:59+00:00 April 13th, 2015||0 Comments

About the Author:

Leave A Comment