+91 9611100374|admin@indiaforyou.in

ಎಲ್ಲಿ ಅರಸುವೆ ನೀನು

//ಎಲ್ಲಿ ಅರಸುವೆ ನೀನು

ಎಲ್ಲಿ ಅರಸುವೆ ನೀನು

ಎಲ್ಲಿ ಅರಸುವೆ ನೀನು ಓ ನನ್ನ ಕಿಂಕರನೆ
ನಿನ್ನ ಬಳಿಯೇ ನಾನು ವಾಸಿಸಿರುವೆ|
ನಾನು ನಿನ್ನೊಂದಿಗೇ ಇದ್ದರೂ ನನಗಾಗಿ
ಎಲ್ಲೊ ದೂರದಿ ಹುಡುಕಿ ಬಳಲುತಿರುವೆ||

ನಾನು ಚರ್ಮದೊಳಿಲ್ಲ ರೋಮದೊಳಗೂ ಇಲ್ಲ
ಅಸ್ಥಿಯಲೊ ಮಾಂಸದಲೊ ಬುದುಗಿಕೊಂಡಿಲ್ಲ|
ಗುಡಿಮಸೀದಿಯೊಲಿಲ್ಲ ಕಾಶಿಕೈಲಾಸದಲೊ
ದ್ವಾರಕೆ ಅಯೋಧ್ಯೆಯೊಳೊ ದೊರೆವನಲ್ಲ||

ಸಂನ್ಯಾಸದೊಳಗಿಲ್ಲ ವೈರಾಗ್ಯದೊಳಗಿಲ್ಲ
ಯೋಗಾದಿ ಸಿದ್ಧಿಗೂ ದೂರ ನಾನು|
ಶ್ರದ್ಧೆ ಎಲ್ಲಿರುವುದೊ ಅಲ್ಲಿ ದೊರೆಯುವೆ ನಾನು
ನನಗಾಗಿ ಹುಡುಕಿದರೆ ದೊರೆವೆ ನಾನು||

—ವಚನವೇದ

By | 2015-04-13T07:51:56+00:00 April 13th, 2015||0 Comments

About the Author:

Leave A Comment