+91 9611100374|admin@indiaforyou.in

ಎನಗೂ ಆಣೆ

Home//ಎನಗೂ ಆಣೆ

ಎನಗೂ ಆಣೆ

ಎನಗೂ ಆಣೆ ರಂಗ ನಿನಗೂ ಆಣೆ|
ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಿಗೂ ನಿನ್ನ ಭಕ್ತರಾಣೆ||

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ| ರಂಗ
ಎನ್ನ ನೀ ಕೌಬಿಟ್ಟು ಪೋದರೆ ನಿನಗೆ ಆಣೆ||

ತನುಮನಧನದಲಿ ವಂಚಕನಾದರೆ ಎನಗೆ ಆಣೆ |ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ ||

ಕಾಕು ಮನುಜರ ಸಂಗಮ ಮಾಡಿದರೆನಗೆ ಆಣೆ| ರಂಗ
ಲೌಕಿಕವ ಬಿದಿಸದಿದ್ದರೆ ನಿನಗೆ ಆಣೆ||

ಶಿಷ್ಟರ ಸಂಗಮ ಬಿಡಿಸದಿದ್ದರೆ ನನಗೆ ಆಣೆ| ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ||

ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ| ರಂಗ
ಪುರಂದರವಟ್ಠಲ ನೀನೊಲಿಯದಿದ್ದರೆ ನಿನಗೆ ಆಣೆ||

—-ಪುರಂದರದಾಸ

By | 2015-04-13T07:07:13+00:00 April 13th, 2015||0 Comments

About the Author:

Leave A Comment