+91 9611100374|admin@indiaforyou.in

ಆತುರದಿ ಹಾತೊರೆದು

//ಆತುರದಿ ಹಾತೊರೆದು

ಆತುರದಿ ಹಾತೊರೆದು

ಆತುರದಿ ಹಾತೊರೆದು ಬಂದೆ ಅವ್ವಾ ಎಂದು |
ಯಾತರದು ಕಾತರವು ನಿನ್ನ ಬಳಿಗಿಂದು ||

ಹೆರತನದ ಹೆದರಿಕೆಯು ಹೃದಯದೊಳು ಹೊಕ್ಕಿಹುದು
ನರತನದ ಹುದುರೊಳಗೆ ಜೀವ ಸಿಕ್ಕಿಹುದು|
ಹೊರೆತನದ ಬಲೆಯೊಳಗೆ ಬುದ್ಧಿ ಬಳಲಾಡುವುದು
ಪರೆ ನಿನ್ನ ಕಿಂಕರಗೆ ಅಭಯಕರ ನೀಡೌ||

ಎತ್ತೆತ್ತ ನೋಡಿದರು ಮತ್ತೆ ಬೇರೆ ಇಲ್ಲ
ಅತ್ತ ನೀನೇ ಮತ್ತು ಇತ್ತ ನೀನು|
ಸುತ್ತಿರುವ ಬೆದರಿಕೆಯ ಬಟ್ಟೆಯನು ಕಳೆದೊಗೆದು
ಬತ್ತಲಾದೆನು ಅವ್ವ ಬಾಲನಂತೆ ನಾನು||

ಮುಚ್ಚಿಡುವುದೇಕಿನ್ನು ಬಚ್ಚಿಡುವುದಿನ್ನೆಲ್ಲಿ
ಮುಚ್ಚಿಮರೆ ಮಾಳ್ಪುದಕೆ ಮುಸುಕು ಇಹುದೆಲ್ಲಿ|
ನೆಚ್ಚು ಮೆಚ್ಚುಗಳನ್ನು ಬಿಚ್ಚು ಜೇವದೊಳೆತ್ತಿ
ಹೊಚ್ಚಿ ಪ್ರೀತಿಯ ಸೆರಗ ಎತ್ತಿಕೋ ಎನ್ನ||

—–ದ.ರಾ. ಬೇಂದ್ರೆ

By | 2015-04-10T08:27:39+00:00 April 10th, 2015||0 Comments

About the Author:

Leave A Comment