+91 9611100374|admin@indiaforyou.in

ಅಂತರತಮ ನೀ ಗುರು

Home//ಅಂತರತಮ ನೀ ಗುರು

ಅಂತರತಮ ನೀ ಗುರು

ಅಂತರತಮ ನೀ ಗುರು
ಹೇ ಆತ್ಮತಮೋಹಾರಿ||

ಜಟಿಲಕುಟಿಲತಮ ಅಂತರಂಗ ಬಹು
ಭಾವವಿಪಿನ ಸಂಚಾರಿ|
ಅಂತರತಮ ನೀ ಗುರು
ಹೇ ಆತ್ಮತಮೋಹಾರಿ||

ಜನುಮಜನುಮ ಶತಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ|
ಅಂತರತಮ ನೀ ಗುರು
ಹೇ ಆತ್ಮತಮೋಹಾರಿ||

ಪಾಪಪುಣ್ಯ ನಾನಾ ಲಲಿತ ರುದ್ರಲೀಲಾ
ರೂಪಅರೂಪ ವಿಹಾರಿ|
ಏಂತರತಮ ನೀ ಗುರು
ಹೇ ಆತ್ಮತಮೋಹಾರಿ||

—-ಕುವೆಂಪು

By | 2015-04-10T07:21:20+00:00 April 10th, 2015||0 Comments

About the Author:

Leave A Comment