+91 9611100374|admin@indiaforyou.in

ಅಲ್ಲಿದೆ ನಮ್ಮನೆ

Home//ಅಲ್ಲಿದೆ ನಮ್ಮನೆ

ಅಲ್ಲಿದೆ ನಮ್ಮನೆ

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ||

ಕದ ಬಾಗಿಲಿರಿಸಿದ ಕಳ್ಳಮನೆ —ಇದು
ಮುದದಿಂದ ಲೋಲಾಡೊ ಸುಳ್ಳುಮನೆ|
ಇದಿರಾಗಿ ವೈಕುಂಠವಾಸ ಮಾಡುವಂಥ
ಪದುಮನಾಭನ ದಿವ್ಯ ಬದುಕು ಮನೆ||

ಮಾಳಿಗೆ ಮನೆಯೆಂದು ನೆಚ್ಚಿ ಕೆಡಲಿಬೇಡ
ಕೇಳಯ್ಯ ಹರಿಕಥೆ ಶ್ರವಣಂದಳ|
ನಾಳೆ ಯಮದೂತರು ಬಂದೆಳೆದೊಯ್ವಾದ
ಮಾಳಿಗೆ ಮನೆಯು ಸಂಗಡ ಬಾರದಯ್ಯ||

ಮಡದಿ ಮಕ್ಕಳೆಂಬ ಹಂಬಲ ನಿನಗೇಕೋ
ಕಡುಗೊಬ್ಬುತನದಲಿ ನಡೆಯದಿರು|
ಒಡೆಯ ಶ್ರೀ ಪುರಂದರವಿಟ್ಠಲನ ಚರಣವ
ದೃಢಭಕ್ತಿಯಲಿ ನೀ ಭಜಿಸಾಲೊ ಮನುಜನೆ||

By | 2015-04-09T13:09:45+00:00 April 9th, 2015||0 Comments

About the Author:

Leave A Comment