+91 9611100374|admin@indiaforyou.in

ಅನ್ಯಚಿಂತೆಯ ಪಥದಿ

Home//ಅನ್ಯಚಿಂತೆಯ ಪಥದಿ

ಅನ್ಯಚಿಂತೆಯ ಪಥದಿ

ಅನ್ಯಚಿಂತೆಯ ಪಥದಿಮನವಲೆದು ಸಾಗಿರಲು
ನಿನ್ನ ದರ್ಶನ ನನ್ನ ನಾಚಿಸಿಹುದು ||

ಜೀವನದ ಜಲದಿಯಲಿ ಪಯಣಗೈಯುವ ನನಗೆ
ನೀನೊಂದು ಧ್ರುವತಾರೆ ನನ್ನ ಗುರುನೆ|
ಕಡೆಯಿಲ್ಲದೀ ಕಡಲ ಬಳಸುದಾರಿಯೂಳಾನು
ದಿಕ್ಕು ತಪ್ಪದೆ ಇನ್ನು ಪಯಣಗೈವೆ||

ಇಲ್ಲಿ ನಾನಲೆವಾಗ ಎಂದಾದರೂ ನನ್ನ
ಎದೆಯು ಮಿಡುಕಾಡುತಿರೆ ನೋವಿನಲ್ಲಿ|
ಮೇಲೆ ನಿನ್ನಯ ಕರುಣಕಾಂತಿಯುಜ್ವಲ ತಾರೆ
ಬೆಳಗಿ ಸಂತೈಸುವುದು ಹಾದಿಯಲ್ಲಿ||

ನನ್ನಂತರಂಗದಲಿ ನಿನ್ನ ಮುಖವೆಂದಿಗೂ
ಚಿರಮಧುರ ಕಾಂತಿಯಲಿ ಶೋಭಿಸಿಹುದು|
ಒಂದೆ ಚಣ ನಾ ನಿನ್ನ ಕಾಣದಿದ್ದರೆ ಎದೆಯು
ಅತುಲ ವೇದನೆಯಲ್ಲಿ ತುಡಿಯುತಿಹುದು||

—–ವಚನವೇದ

By | 2015-04-09T10:10:11+00:00 April 9th, 2015||0 Comments

About the Author:

Leave A Comment